Search This Blog

Thursday, 24 November 2016

ಇದೆಂಥ ಸಾವು!!

*#ಸುಮ್ನೆ_ತಮಾಷೆಗೆ*
*#ಸೀರಿಯಸ್ಸೇ_ಅಲ್ಲ*

ಕೂಸೆ, ನಿನ್ನ್ ಕಂಡಾಗ್ಲಿಂದೆ ನಾ ಪೂರಾ ಕೆಟ್ಟೆ...
.
.
.
.
.
.
.

ಎನ್ನ ಮನಸಲ್ ಬಂತು ಹೊಸ ಆಸೆಯ ಮೊಟ್ಟೆ...
.
.
.
.
.
.
.
.
ಆ ಆಸೆಯ ಮೊಟ್ಟೆಗೆ ನೀ ಕೊಟ್ಟೆ ಪ್ರೀತಿಯ ಕಾವು...
.
.
.
.
.
.
.
.
.
.
.
ಆ ಆಸೆಯ ಮೊಟ್ಟೆಗೆ ನೀ ಕೊಟ್ಟೆ ಪ್ರೀತಿಯ ಕಾವು...
.
.
.
.
.
.
.
.
.
ಈಗ ನೀ ಎನ್ನ ಹೆಂಡತಿ, ನಾ ಹಲ್ ಕಿತ್ತ ಹಾವು...

#ಮದುವೆ_ಆದ್ರೂ_ಸಮಸ್ಯೆ
#ಆಗ್ದೋದ್ರೂ_ಸಮಸ್ಯೆ

ಹಳೆಯ ನೋಟಿನ ಕಥೆಯಿದು!!

#ಸುಮ್ನೆ_ತಮಾಷೆಗೆ
#ಸೀರಿಯಸ್ಸೇ_ಅಲ್ಲ

ನಮ್ಮ ಸಿದ್ದು ಹೇಳ್ತಿದ್ದ ಮಾರಾಯ್ರೇ....

"ನಾನು ಕರ್ನಾಟಕದಲ್ಲಿ ಭಾಗ್ಯಗಳ ಯೋಜನೆ ತಂದೆ...

ಅದ್ ನೋಡ್ಕಂಡು ಮೋದಿ 500, 1000 ಬ್ಯಾನ್ ಮಾಡಿದ್ದೂ ಒಂದು ಭಾಗ್ಯ ಯೋಜನೆಯೇ.. ಇದು "ಸೌ"ಭಾಗ್ಯ ಯೋಜನೆ." (ಸೌ=100)

#ಅದು_ಸಾವಿರದ_ನೋಟು
#ಆದರೂ_ಸಾಯುತ್ತಿದೆ

ಹಳೆಯ ನೋಟಿನ ಕಥೆಯಿದು!!

#ಸುಮ್ನೆ_ತಮಾಷೆಗೆ
#ಸೀರಿಯಸ್ಸೇ_ಅಲ್ಲ

ಮೊನ್ನೆ ಬ್ಯಾಂಕಿಗ್ ಹೋಗಿದ್ದೆ...

ಮೆನೇಜರ್ ಜೊತೆ ಹಂಗೆ ಎರಡು ಮಾತಾಡ್ದೆ..

"ಮತ್ತೆಂತಾ ವಿಶೇಷ ಸರ್?"

"ಎಂತಾ ಇಲ್ಲೆ.. ಈ 500 ಮತ್ತೆ 1000 ನೋಟ್ ಬ್ಯಾನ್ ಆಗಿದ್ದೇ ವಿಶೇಷ..

ಮತ್ತೊಂದ್ ವಿಶೇಷ ಎಂತದು ಗೊತ್ತಿದ್ದನ್ರಾ?

ಈಗೀಗ ಬ್ಯಾಂಕ್ ಪೂರಾ ಮಸಾಲೆ ಪರಿಮಳ ಬತ್ತಾ ಇದ್ದು. ಜೀರಿಗೆ, ಕೊತ್ತಂಬರಿ, ಅರಿಸಿನ, ಲವಂಗ ಇಂತಾದೇ ಪರಿಮಳ.."
😮😮😇😇
#ಗಂಡಸರ_ದುಡಿಮೆ
#ಹೆಂಗಸರ_ಉಳಿತಾಯ
#ಬ್ಯಾಂಕಲ್ಲಿ_ಪುಗ್ಸಟ್ಟೆ_ಪರಿಮಳ

Wednesday, 31 August 2016

ಕ್ಷಣ ಕ್ಷಣ

ಚೆಲುವೆ, ಜೊತೆ ಕಳೆದ ಆ ಮರೆಯಲಾಗದ ಕ್ಷಣ...

.
.
..
.
.
.
.
.
.
.
ಚೆಲುವೆ, ಜೊತೆ ಕಳೆದ ಆ ಮರೆಯಲಾಗದ ಕ್ಷಣ....
.
.
..
.
.
.
.
.
.
.
.
.
.
.
ಎಣ್ಣೆ ಹಾಕಿ ತೊಳೆದರೂ ಕೈಬಿಡದ ಹಲಸಿನ ಮೇಣ...

😂😂😂.

Saturday, 20 August 2016

ರೂಪಸಿ

ಏನನು ಉಸುರಲಿ
ಉಸಿರು ನಿಂತಿದೆ,
ಈ ಸರಸಿಯ ವದನ
ಶಶಿಯು ನಾಚಿದೆ.

ಕುತೂಹಲಭರಿತ
ನಯನಗಳ ಚೆಲುವೆ,
ಬೆಳಕಿನಂದದಿ
ಮಿನುಗುತಿರುವೆ,

ಕೊಂಚ ಸುರುಳಿ
ನವಿರು ವೇಣಿ,
ಹಿತವ ಎರೆವ
ಮಧುರ ವಾಣಿ,

ಅಸಿಯ ಅಲುಗು
ಹೊಳೆವಂದದ ರೂಪಸಿ,
ಕವಿಯಾದೆ ನಾ
ಈ ಕವನ ರೂಪಿಸಿ..

Wednesday, 17 August 2016

ಜನಿವಾರ-ಗಿಳಿಗುಟ್ಟ

ಪೇಟೆ ಜೀವನ ಎಂತಾ ಕೇಳ್ತ್ರಿ?

ನಮ್ಮ ಸಂಸ್ಕೃತಿ, ಸಂಪ್ರದಾಯ follow ಮಾಡಲೆ ಪೇಟೆಲಿ ಕಷ್ಟ.

ಮನೆ, ಕೋಳಿ ಇಲ್ಲದ ಕೋಳಿಗೂಡ್ ನಷ್ಟೆ ದೊಡ್ಡ..!!!

ಮುಸುರೆ ಶಾಸ್ತ್ರ ಯಾರೂ ಮಾಡ್ತ್ವಿಲ್ಲೆ..!!!!

ಪೂಜೆ ಮಾಡಲೆ time ಇಲ್ಲೆ.....!!!!

ಕಡೆಗೆ ಯಾವುದೂ ಬೇಡ, ಎಂತೂ ಶಾಸ್ತ್ರ ಮಾಡದೇ ಇದ್ದವು ಜನಿವಾರ ತೆಗೆದು ಇಟ್ ಬಿಡುವಾ ಅಂದ್ರೆ...

.....

....
ಜೋತ್ ಹಾಕಲೆ ಗಿಳಿಗುಟ್ಟವೂ ಇರ್ತಿಲ್ಲೆ,,..!!!

#ಕೇವಲ_ತಮಾಷೆಗೆ.....
#ಸಿರೀಯಸ್ಸೆ_ಅಲ್ಲ...

ಗೌಡನ ಅಪ್ಪನ ಶ್ರಾದ್ಧ... ಗಪ್ಪತಿಭಾವನ ಪ್ರಾರಬ್ಧ...

*#ಸುಮ್ನೆ_ತಮಾಷೆಗೆ*
*#ಸೀರಿಯಸ್ಸೇ_ಅಲ್ಲ*

ಒಂದ್ ಸಲ ಗಪ್ಪತಿಭಾವ ಕೊನೆಗೌಡನ ಮನೆಗ್ ಹೋಗಿದ್ದ.

ಕೊನೆಗೌಡಂದು ಒಂದೇ ಹಠ..

ನನ್ನಪ್ಪನ ಶ್ರಾದ್ಧನೂ ಭಟ್ಟಕ್ಕಳ ಶ್ರಾದ್ಧದಂಗೆ ಮಾಡ ಹೇಳಿ..

ಗಪ್ಪತಿ ಭಾವ ಶ್ರಾದ್ಧದ ಭಟ್ಟರು...

"ಗೌಡ ಮಡಿ ನೀರ್ ತಗಂಡ ಬಾರಾ".

ಮಡಿ ಸುತ್ತಿಕಂಡ್ ನೀರ್ ತಂದ್ರೆ ಅದೇ ಮಡಿನೀರು..

ಗೌಡ, ಗೌಡನೇಯಾ.

"ಮೂರ್ ಸಲ ನೀರು ಕುಡಿಯಾ"..

ಗೌಡ ಮೂರು ಸಲ ತಂಬಿಗೆ ಎತ್ತಿದ. ತಂಬಿಗೆ ನೀರ್ ಖಾಲಿ...

ಗೌಡ, ಗೌಡನೇಯಾ.

"ಎರಡ್ ಸಲ ನೀರ್ ಚಲ್ಲು".

ಗೌಡ ನೀರ್ ಚಲ್ಲಿ ಕೋಣೆ ತುಂಬಿಸಿದ.

ಗೌಡ, ಗೌಡನೇಯಾ.

ಗೌಡನ ಅಪ್ಪನ ಶ್ರಾದ್ಧ... ಗಪ್ಪತಿಭಾವನ ಪ್ರಾರಬ್ಧ...

ಕೂಸು ಹೆಂಗಿರ?

*#ಸುಮ್ನೆ_ತಮಾಷೆಗೆ*
*#ಸೀರಿಯಸ್ಸೇ_ಅಲ್ಲ*

ಅಂವ ಕವಿಪುಂಗವ...
ನಾನು ಸುಮ್ನೆ ಪುಂಗಿ ಊದುವವ...

ಸುಮ್ನೆ time ಹಾಳ ಮಾಡ್ತಾ ಕುತಕಂಡ್ದಿದ್ಯ...

ಅಂವ ಹೇಳಿದ...

"ನನ್ನ ಮದುವೆಯಪ್ಪ ಕೂಸು ಹೆಂಗಿರ ಗೊತ್ತಿದ್ದಾ?

ಜಿಂಕೆ ಕಣ್ಣು,

ಕಂಬಳಿಹುಳದಂಥ ಹುಬ್ಬು,

ಗಿಣಿ ಮೂಗು,

ಕೋಗಿಲೆ ಕಂಠ,

ಸಿಂಹ ಕಟಿ,

ನವಿಲಿನ ನಡೆ,

ನಾಗ ಜಡೆ,

ಎಲ್ಲಾ ಇರ...."
.
.
..
.
.
.
.'.
.
.
.
.
.
.
.
.
.

.
.
.
.
.
.

ನಾನಂದೆ...
"ಹಂಗಾರೆ ಕೂಸು ಯಾರೂ ನೋಡದೆ ಇರ ಹೊಸ hybrid ತಳಿ ಪ್ರಾಣಿ ಆಗಿರಲಕ್ಕು"