Search This Blog

Saturday, 20 July 2013

ನಗುವುದೋ?! ಅಳುವುದೋ!?


ಕಲ್ಪನೆಗಳು ಖಾಲಿಯಾದವೇನೋ,
ಕನಸು ಬೀಳುತ್ತಿಲ್ಲ...

ಭಾವನೆಗಳು ಬರಿದಾದವೇನೋ,
ಕವನ ಇಣುಕುತ್ತಿಲ್ಲ...

ಒಲವಿನೊರತೆ ಬತ್ತಿತೇನೋ,
ಮನಸು ತುಡಿಯುತ್ತಿಲ್ಲ...

ಗೆಳತಿ, ಕೊನೆಗೂ ನಾ
ನಿನ್ನ ಜೊತೆ ನಗಲಾಗಲಿಲ್ಲ...

Friday, 12 July 2013

ನೆರಳು-ಬೆಳಕು


ನಿನ್ನ ನೆರಳಾಗಿರುವೆ ಗೆಳತಿ,
ನಿನ್ನೊಲವಿನ ಬೆಳಕಿರುವವರೆಗೆ..

ಚಿತ್ತ ಭಿತ್ತಿ


ಇತ್ತ ಬಾ ಗೆಳತಿ
ಪ್ರೀತಿಯ ಬೀಜ
ಬಿತ್ತಿ ಬಿಡು,
ಹೃದಯಕುಸುಮ ಕಿತ್ತು
ನಿನ್ನ ಮುಡಿಗಿಡುವಂತೆ
ಮಾಡಿ ಬಿಡು..

ಜಗವ ಮರೆತು
ನಿನ್ನ ಸುತ್ತ ಸುತ್ತುವಾಗ
ಹತ್ತು ಬಾರಿ
ತಿರುಗಿ ನೋಡಿ
ಚಿತ್ತವ
ಕಾಡಿ ಬಿಡು..

ಮೆತ್ತಗಿನ ಮಾತ
ನಡುವೆ
ಕತ್ತು ಬಗ್ಗಿಸಬೇಡ
ಮತ್ತೆ ಕಾಯದೆ
ಮಿಂಚಿನ ಮುತ್ತೊಂದ
ಇಟ್ಟು ಬಿಡು..

ಹಲವ ಹಲುಬುವ
ನನಗೆ
ಹೆಚ್ಚು ಹಂಬಲವಿಲ್ಲ
ಚೂರು ಚಂದನದ
ಗಂಧದೊಲವ
ಕೊಟ್ಟು ಬಿಡು..