Search This Blog

Wednesday, 17 August 2016

ಗೌಡನ ಅಪ್ಪನ ಶ್ರಾದ್ಧ... ಗಪ್ಪತಿಭಾವನ ಪ್ರಾರಬ್ಧ...

*#ಸುಮ್ನೆ_ತಮಾಷೆಗೆ*
*#ಸೀರಿಯಸ್ಸೇ_ಅಲ್ಲ*

ಒಂದ್ ಸಲ ಗಪ್ಪತಿಭಾವ ಕೊನೆಗೌಡನ ಮನೆಗ್ ಹೋಗಿದ್ದ.

ಕೊನೆಗೌಡಂದು ಒಂದೇ ಹಠ..

ನನ್ನಪ್ಪನ ಶ್ರಾದ್ಧನೂ ಭಟ್ಟಕ್ಕಳ ಶ್ರಾದ್ಧದಂಗೆ ಮಾಡ ಹೇಳಿ..

ಗಪ್ಪತಿ ಭಾವ ಶ್ರಾದ್ಧದ ಭಟ್ಟರು...

"ಗೌಡ ಮಡಿ ನೀರ್ ತಗಂಡ ಬಾರಾ".

ಮಡಿ ಸುತ್ತಿಕಂಡ್ ನೀರ್ ತಂದ್ರೆ ಅದೇ ಮಡಿನೀರು..

ಗೌಡ, ಗೌಡನೇಯಾ.

"ಮೂರ್ ಸಲ ನೀರು ಕುಡಿಯಾ"..

ಗೌಡ ಮೂರು ಸಲ ತಂಬಿಗೆ ಎತ್ತಿದ. ತಂಬಿಗೆ ನೀರ್ ಖಾಲಿ...

ಗೌಡ, ಗೌಡನೇಯಾ.

"ಎರಡ್ ಸಲ ನೀರ್ ಚಲ್ಲು".

ಗೌಡ ನೀರ್ ಚಲ್ಲಿ ಕೋಣೆ ತುಂಬಿಸಿದ.

ಗೌಡ, ಗೌಡನೇಯಾ.

ಗೌಡನ ಅಪ್ಪನ ಶ್ರಾದ್ಧ... ಗಪ್ಪತಿಭಾವನ ಪ್ರಾರಬ್ಧ...

No comments:

Post a Comment