ಏನನು ಉಸುರಲಿ ಉಸಿರು ನಿಂತಿದೆ, ಈ ಸರಸಿಯ ವದನ ಶಶಿಯು ನಾಚಿದೆ.
ಕುತೂಹಲಭರಿತ ನಯನಗಳ ಚೆಲುವೆ, ಬೆಳಕಿನಂದದಿ ಮಿನುಗುತಿರುವೆ,
ಕೊಂಚ ಸುರುಳಿ ನವಿರು ವೇಣಿ, ಹಿತವ ಎರೆವ ಮಧುರ ವಾಣಿ,
ಅಸಿಯ ಅಲುಗು ಹೊಳೆವಂದದ ರೂಪಸಿ, ಕವಿಯಾದೆ ನಾ ಈ ಕವನ ರೂಪಿಸಿ..
No comments:
Post a Comment