ನಾ ನಿನ್ನ ವರಿಸಿದೆ
ನೀ ನನ್ನ ಆವರಿಸಿದೆ
ನಾ ಏನೆಲ್ಲಾ ಅರಸಿ
ಬಂದೆನೋ?
ಅರಸಿ ಅರಸಿ ನೀ
ಏನೆಲ್ಲಾ ತಂದೆಯೋ?
ನೀ ಅರಸಿಯ
ತೆರದಿ ಕಂಡೆ
ಹೆಸರಿಗೆ ಲೇಸ
ತಂದೆ
ಅರಸಿಯ ಅರಸೆ
ಮತ್ತೆ ಮಾತಿಲ್ಲ
ಮುತ್ತನರಸಿ ಬರೆ
ಮತ್ತು ಮತ್ತಿಲ್ಲ
ಒಪ್ಪುವ ಅಂದ
ಅದು ಬಹಿರಂಗ
ಬೇಕೇ??
ಒಪ್ಪಿದ ಅಂದ
ಒಪ್ಪಂದ
ಅದು ಅಂತರಂಗ
ಸಾಕೇ??