Search This Blog

Saturday, 4 April 2020

ಬಾಲೆಗೊಂದು ಸಾಲು

ಏನೋ ಹಳೆಯ ನೆನಪು
ಕಪ್ಪುಬಿಳುಪಿನ ಚಿ‌ತ್ರ
ಬೆಳದಿಂಗಳ ಬಾಲೆಯಲ್ಲ ಈಕೆ
ಕನ್ನಡಕದ ಬಾಲೆಯಂತೆ!

ಹುಣ್ಣಿಮೆ ಚಂದಿರನಿಗೆ
ಕಪ್ಪು ಕನ್ನಡಕ ಹಾಕಿದಂತೆ
ಬಿಡುಗೂದಲ ಮುಸುಕು
ಕರಿ ಮೋಡದಂತೆ

ನಾನು ಹಲುಬುತ್ತೇನೆ,
ಕನ್ನಡಕ ಹಾಗೇ ಇರಲಿ
ಹೊಳಪಿನ ಕಂಗಳಿಗೆ
ದೃಷ್ಟಿಯಾಗದಂತೆ

ಬಿಳಿ ಮೊಗ  ಕಪ್ಪು ಕಂಗಳು
ಕಡುಗಪ್ಪು ಗುಂಗುರು
ನೋಡಿದರೆ ನಿನ್ನ ಪಟ
ಕಪ್ಪು ಬಿಳುಪಿನಂತೆ!

ನಿನ್ನ ಬಣ್ಣವೇ ಹಾಗೆ
ಕಣ್ಣು ಕುಕ್ಕುವುದಿಲ್ಲ
ಸಣ್ಣ ಮುಗುಳುನಗೆ
ಮೊಗಕೆ ಸಿಂಗಾರದಂತೆ

ಕನ್ನಡಕವ ತೆಗೆಯಬೇಡ
ಕಣ್ಣೋಟ ಬೆರೆತರೆ
ಕುರುಡನಾದೇನು
ಬೇರೇನೂ ಕಾಣದಂತೆ!!

No comments:

Post a Comment