ನಿನ್ನೆ ನಿನ್ನ
ಕಂಬನಿಯ ಹನಿ
ನನ್ನ ಬೆನ್ನಿಗೆ ತಾಗಿ
ಮನ ತೊಯ್ದುಹೋಯ್ತು
ಮಾತು ಮೂಕವಾಗಿ
ಮನಕೆ ಮೌನ
ಬುದ್ಧಿಗೂ ಮೆದುಳಿಗೂ
ಸಂಪರ್ಕವಿಲ್ಲ
ಗಾಡಿ ಓಡುತ್ತಿತ್ತು
ಹೃದಯ ನಿಶ್ಚಲವಾದ ಅನುಭವ
ಒಂದನ್ನೊಂದು ಹಿಂದಿಕ್ಕಿ
ಹೋಗುವ ತೆರದಿ ವಿಚಾರಗಳು
ಪಟಪಟನೆ ಹಾದುಹೋದವು
ನಿಜಸತ್ಯ ಅರ್ಥವಾಗಲಿಲ್ಲ
ಅರ್ಥ ಮನದ ಗರ್ಭದಲ್ಲೇ ಉಳಿಯಿತು
ಹೂತುಬಿಡುತ್ತೇನೆ ಆ ಕ್ಷಣದ ನೆನಹುಗಳನ್ನು
ಮತ್ತೆ ತಾಳಲಾರೆ ಆ ಅಂತರಾಳದ ಗಾಯವಾಗದ ನೋವುಗಳನ್ನು...
No comments:
Post a Comment