ಮುಸ್ಸಂಜೆಗತ್ತಲಿನಲ್ಲಿ
ಹುಲ್ಲು ಹಾಸಿನ ಮೇಲೆ
ಕಿರುಬೆರಳ ಬೆಸೆದು
ಹೆಜ್ಜೆ ಹಾಕುವಾಸೆ....
ಪಡುವಣದ
ಹೊಂಬಣ್ಣದ ರವಿಯ
ಬಿಂಬವ
ನಿನ್ನ ನಯನದಲಿ
ನೋಡುವಾಸೆ...
ಮರುಳು ಮಾಡುವ
ನಿನ್ನ ಅರಳಿದ ಮೊಗವ
ಬೊಗಸೆಯಲಿ ಬಂದಿಸಿ
ಅನಂತದವರೆಗೆ
ಬಾಳುವಾಸೆ....
ಸುತ್ತಲಂದದಿ
ಗಂಧ ಪಸರಿಸುವ
ಚಂದನದ ಬೊಂಬೆಗೆ
ಮಂದಮಾರುತವಾಗಿ
ಜೊತೆಯಾಗುವಾಸೆ.....
No comments:
Post a Comment